ಮುಖಪುಟ - ಪದನೆರಕೆ ಸಂಪಾದಿಸಿ

ನಮಸ್ಕಾರ ತೇಜಸ್, ಸಂದೀಪ ಅವರ ಪುಟದಲ್ಲಿ ನಿಮ್ಮ ಅನಿಸಿಕೆ ಓದಿದೆ. Dictionary = ಪದನೆರಕೆ, ಈ ಪದ ಇಲ್ಲಿ ಕಂಡುಕೊಳ್ಳಬಹುದು : http://www.baraha.com/kannada/index.php "ಮುಕ್ತ" ಅನ್ನುವುದಕ್ಕಿಂತ "ತೆರೆದ" ಅನ್ನುವುದು ಚೆನ್ನಾಗಿದೆ. (ತೆರೆದ ಅಂಚೆ, ತೆರೆದ ಬಾಗಿಲು). ಆದ್ದರಿಂದ "ತೆರೆದ ಪದನೆರಕೆ" ಬಳಸುವುದು ಸರಿಯೆನಿಸುವುದು.

- ಪ್ರಶಾಂತ ಸೊರಟೂರ

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಶಾಂತ, ನಿಮ್ಮ ಸಲಹೆಯಂತೆ ಬರಹ ತಾಣದಲ್ಲಿ ಪದನೆರಕೆ ಎಂಬ ಪದಕ್ಕೆ ಹುಡುಕಿದೆ ಆದರೆ ಯಾವುದೇ ಫಲಿತಾಂಶ ದೊರೆಯಲಿಲ್ಲ. <br\>ಮುಕ್ತ ಅನ್ನುವುದಕ್ಕೆ ಬಂಧನವನ್ನು ಕಳಚಿದ, ಮುಚ್ಚುಮರೆಯಿಲ್ಲದ, ನಿಷ್ಕಪಟವಾದ, ತೆರೆದ ಎಂಬ ಅರ್ಥ ಇದೆ.<br\> "ತೆರೆದ" ಅನ್ನುವುದಕ್ಕೆ ಬಿಚ್ಚಿದ. ಆರಂಭಿಸಿದ, ಮುಚ್ಚಿಲ್ಲದ ಎಂಬ ಅರ್ಥ ಇದೆ. ಮುಕ್ತ ಎಂಬ ಅರ್ಥ ಪ್ರಾಸಂಗಿಕವಾಗಿ ಬಂದರೂ ವಿಕ್ಷನರಿಯ ವ್ಯಾಪ್ತಿಯಲ್ಲಿರುವಂತೆ ಅರ್ಥೈಸುವುದಿಲ್ಲ.<br\> ಇಂಗ್ಲಿಷ್ ಆವೃತ್ತಿಯಲ್ಲಿರುವ "Wiktionary, the free dictionary" ಅನ್ನು ಭಾಷಾಂತ ಮಾಡಿದರೂ ತೆರೆದ ಆನುವುದು ಸೂಕ್ತವಾಗುವುದಿಲ್ಲ. ಮುಕ್ತ ತಂತ್ರಾಂಶಗಳ ಬಗ್ಗೆ ಮಾತನಾಡುವಾಗ Free ಅನ್ನು "you should think of 'free' as in 'free speech', not as in 'free beer' ಎಂದು ಅರ್ಥೈಸುತ್ತಾರೆ. ಈರೀತಿ ಇಲ್ಲಿ ಮುಕ್ತ ಎನ್ನುವುದು ಹೆಚ್ಚು ಸೂಕ್ತ ಎಂದು ನನ್ನ ಅನಿಸಿಕೆ. ವಿರೊಧವಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ.<br\> -- ತೇಜಸ್ / ಚರ್ಚೆ/ ೧೩:೪೨, ೧ ಮೇ ೨೦೧೨ (UTC)
ತೇಜಸ್ ಅವರೆ, ಬರಹ ಅಂತರ್ಜಾಲ ನಿಘಂಟಿನಲ್ಲಿ Dictionary ಅಂತಾ ಬರೆಯಿರಿ. ಇಲ್ಲಿ "ತೆರೆದ" ಅನ್ನುವುದು "free" ಗೆ ಸಮಾನಾಂತರವಾಗಿ ಬಳಸದೇ ಎಲ್ಲರೂ ಅಡೆತಡೆ ಇಲ್ಲದೇ (ಅಳುಕದೇ) ತೊಡಗಿಕೊಳ್ಳಬಹುದಾದದ್ದು ಅನ್ನುವ ಹುರುಳು ಹೊರಸೂಸುವಂತದು."ತೆರೆದ ಮನದಿಂದ ಸ್ವಾಗತಿಸಿದರು" ಅನ್ನುವ ಸಾಲುಗಳಂತೆ, ಇದು ಎಲ್ಲರನ್ನೂ ನಲ್ಮೆಯಿಂದ ಬರಮಾಡಿಕೊಳ್ಳುವ ಪದನೆರಕೆ ಎನ್ನುವಂತೆ, "ತೆರೆದ" ಅನ್ನುವುದೂ ಹೆಚ್ಚು ಸಮಂಜಸವಾದದ್ದು ಅಂತಾ ನನಗನಿಸುತ್ತೆ.


dictionary ಅಂತ ಹುಡುಕಿದರೆ ಬರಹದಲ್ಲಿ 'ಪದನೆರಕೆ' ಎಂಬ ಕನ್ನಡ ಸಮಾನಾರ್ಥಕ ಸಿಗುತ್ತದೆ.ಇನ್ನು 'ಮುಕ್ತ'ದ ಪರವಾಗಿ ನೀವು ಕೊಟ್ಟಿರುವ ವಾದ ನನಗೆ ಅರ್ಥವಾಗಲಿಲ್ಲ. 'ಮುಕ್ತ' ಮತ್ತು 'ತೆರೆದ' ಎರಡೂ ಒಂದೇ ಅರ್ಥದ ಪದಗಳು. ತೆರೆದ ಎಂಬುದರಲ್ಲಿ 'free beer'ಅಲ್ಲಿರುವ ಬಿಟ್ಟಿ ಎಂಬ ಅರ್ಥ ಬರುವುದಿಲ್ಲ. ಬದಲಾಗಿ 'free speech' ಎಂಬುದುರಲ್ಲಿರುವ ಭಾವವೇ ಇದೆ. ಎರಡರಲ್ಲಿ 'ತೆರೆದ' ಹೆಚ್ಚು ಸೂಕ್ತ ಅನಿಸುವುದೇಕೆಂದರೆ ಅದು ಆಡು ನುಡಿಯಲ್ಲೂ ಬಳಕೆಯಲ್ಲಿದ್ದು ಸಾಮಾನ್ಯ ಮಂದಿಗೆ ಹತ್ತಿರವಾಗಿದೆ.
--Sandeepkambi (talk) ೧೯:೦೬, ೨ ಮೇ ೨೦೧೨ (UTC)
ಪ್ರಶಾಂತ ಮತ್ತು ಸಂದೀಪ್ ಅವರೇ,
* ಪದನೆರಕೆ: ಪದನೆರಕೆಯ ಉಲ್ಲೇಖ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ಶಬ್ದಕೋಶ, ಪದಕೋಶ, ಅರ್ಥಕೋಶ, ನಿಘಂಟು ಪದಗಳು ಜನರಲ್ಲಿ ಹೆಚ್ಚು ಬಳಕೆಯಲ್ಲಿವೆ. ಇವುಗಳಲ್ಲಿ ಒಂದರ ಉಪಯೋಗ ಹೆಚ್ಚು ಅರ್ಥಪೂರ್ಣ. ಪದನೆರಕೆ (ಪದ) ಇದೂ ಕೂಡಾ ಸಂಸ್ಕೃತ ಮೂಲವಾಗಿದ್ದು ಜನರ ಬಳಕೆಗೆ ಹೆಚ್ಚು ಹತ್ತಿರವಾಗುವುದಿಲ್ಲವೆಂದು ನನ್ನ ಅನಿಸಿಕೆ
* Free: ಈ ವಿಷಯವಾಗಿ ವಿಚಾರಮಾಡಿದಾಗ ಮುಕ್ತ ಮತ್ತು ತೆರೆದ ಎರಡೂ ಪದಗಳ ಬಳಕೆ ಸೂಕ್ತವಲ್ಲವೆನಿಸಿತು. ವಿಕಿಪೀಡಿಯದಲ್ಲಿರುವಂತೆ ಸ್ವತಂತ್ರ ಹೆಚ್ಚು ಸೂಕ್ತ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.
-- ತೇಜಸ್ / ಚರ್ಚೆ/ ೦೪:೩೧, ೩ ಮೇ ೨೦೧೨ (UTC)
"ಪದನೆರಕೆ" ಆಗಲಿ ಯಾವುದೇ ಪದವಾಗಲಿ ಒಂದೆಲ್ಲ ಒಂದು ದಿನ ಹುಟ್ಟಿ ಬೆಳೆದು ಮಂದಿಯ ನಡುವೆ ಅದರ ಪರಿಚಯವಾಗುವುದು ತಾನೇ. ನಾವು ಪದನೆರಕೆಯನ್ನು ಬಳಕೆ ಮಾಡುವುದರಿಂದ ನಮ್ಮ ಮಂದಿಗೆ ಪರಚಯ ಮಾಡೋಣ. ನಮ್ಮ ಮಂದಿಗೆ "ಪದನೆರಕೆ" ಬಳಕೆಯ ಮೂಲಕ ಪರಿಚಯ ಮಾಡಿಸೋಣ. - ವಿವೇಕ ಶಂಕರ,
ತೇಜಸ್ ಅವರೇ, ೧) ಬೇರೆಯ ಪದನೆರಕೆಗಳಿಗೆ ಹೋಲಿಸಿದಾಗ ಇಲ್ಲಿ ಪದನೆರಕೆಯನ್ನು ಬಳಸುವವರು ಪದ ನೋಡುವುದರ ಜೊತೆಗೆ ತಿದ್ದಬಹುದು/ಮಾರ್ಪಡಿಸಬಹುದು/ಹೆಚ್ಚಿನದನ್ನು ಸೇರಿಸಬಹುದು. ಅದಕ್ಕೆ "ತೆರೆದ'" ಚೆನ್ನಾಗಿ ಒಪ್ಪುತ್ತೆ. (ಇಲ್ಲಿ ಸ್ವತಂತ್ರ ಅನ್ನುವುದು ಸರಿಹೋಗುವುದಿಲ್ಲ). ೨) ಇಂಗ್ಲೀಶನ random ಗೆ ಯಾದೃಚ್ಛಿಕ ಪುಟ ಅಂತಾ ಬಲಬದಿಯಲ್ಲಿ ಕೊಡಲಾಗಿದೆ, ಇಂತಹ ಪದಗಳು ಸಾಮಾನ್ಯ ಮಂದಿಗೆ ಬಿಡಿ, ಪದಗಳನ್ನು ತುಸು ಅರಿತವರಿಗೂ ತಲೆಗೆ ಹೋಗದು! ಇದನ್ನು "ಗುಂಪಿಗೆ ಸೇರದಿರುವ" ಅಂತಾ ಮಾರ್ಪಡಿಸಬಹುದು
- ಪ್ರಶಾಂತ ಸೊರಟೂರ
ವಿವೇಕ ಶಂಕರರೇ, ಈಗಾಗಲೇ ಜವರ ಬಳಕೆಯಲ್ಲಿರುವ ಶಬ್ದಕೋಶ ಪದದ ಬಳಕೆ ಏಕೆ ಬೇಡವೆಂಬುದನ್ನು ದಯವಿಟ್ಟು ತಿಳಿಸಿ.
ಪ್ರಶಾಂತ ಅವರೇ,
೧. ಸ್ವತಂತ್ರಎನ್ನುವುದು ಕೆಲವು ನಿಬಂಧನೆಗಳಿಗೆ ಒಳಪಟ್ಟು ಕಾನೂನಿನ ಪರಿಧಿಯಲ್ಲಿ ದೊರೆಯುವಂತಹ ಅಧಿಕಾರ. ಇಲ್ಲಿಯೂ ಸಹ ಬಳಕೆದಾರರು ಪದ ನೋಡುವುದರ ಜೊತೆಗೆ ತಿದ್ದಬಹುದು/ಮಾರ್ಪಡಿಸಬಹುದು/ಹೆಚ್ಚಿನದನ್ನು ಸೇರಿಸಬಹುದಾದರೂ ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ. ಆದ್ದರಿಂದ ಸ್ವತಂತ್ರ ಎನ್ನುವುದು ಸೂಕ್ತವೆಂದು ನನ್ನ ಅಭಿಪ್ರಾಯ.
೨. ನೀವೇ ಹೇಳಿದಂತೆ ಜನರಿಗೆ ಅರ್ಥವಾಗುವ ಪದಬಳಕೆ ಮಾಡಬೇಕೆಂದು ಒಪ್ಪುತ್ತೇನೆ. ಕನ್ನಡ ವಿಕಿಪೀಡಿಯದಲ್ಲಿ random pageಅನ್ನು ಯಾವುದೋ ಒಂದು ಪುಟ ಎಂದು ಅನುವಾದಿಸಲಾಗಿದೆ(ಜನರಿಗೆ ಅರ್ಥವಾಗುವ ಈ ಅನುವಾದವನ್ನು ಬಿಟ್ಟು ಯಾದೃಚ್ಛಿಕ ಎಂಬ ಪದವನ್ನು ಕಲಿಸೋಣ ಅನ್ನುವುದು ತಪ್ಪು). ಇದೇ ಕಾರಣದಿಂದ ಶಬ್ದಕೋಶ ಪದಬಳಕೆ ಸೂಕ್ತವೆಂದು ನನ್ನ ಅಭಿಪ್ರಾಯ.
-- ತೇಜಸ್ / ಚರ್ಚೆ/ ೦೪:೨೫, ೪ ಮೇ ೨೦೧೨ (UTC)
ತೇಜಸ್ ಅವರೇ, [ಹೆಚ್ಚಿನದನ್ನು ಸೇರಿಸಬಹುದಾದರೂ ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ. ಆದ್ದರಿಂದ ಸ್ವತಂತ್ರ ಎನ್ನುವುದು ಸೂಕ್ತ] ಇದು ಒಂದಕ್ಕೊಂದು ಹೊಂದಿಕೊಳ್ಳುತ್ತಿಲ್ಲ. ನಿಬಂಧನೆಗಳಿಗೆ ಒಳಪಟ್ಟಿದ್ದಾರೆ ಅನ್ನಲು "ಸ್ವತಂತ್ರ" ಅಂತಾ ಏಕೆ ಸೂಚಿಸಬೇಕು?
ಪ್ರಶಾಂತ ಅವರೇ, Free ಅನ್ನುವುದರ ವ್ಯಾಖ್ಯಾನವನ್ನು http://www.gnu.org/philosophy/free-sw.htmlನಲ್ಲಿ ನೋಡಬಹುದು. ಹಾಗೆಯೇ, ದಯವಿಟ್ಟು ಶಬ್ದಕೋಶ ಪದಬಳಕೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. -- ತೇಜಸ್ / ಚರ್ಚೆ/ ೧೪:೩೪, ೪ ಮೇ ೨೦೧೨ (UTC)
ತೇಜಸ್ ಅವರೇ, ೧) free ಗೆ ನೀವು ತೋರಿಸಿದ ಕೊಂಡಿಯಲ್ಲಿ ಕೊಟ್ಟಿದ್ದನ್ನು ಓದಿದ ಮೇಲಂತೂ "ತೆರೆದ" ಪದವೇ ಇಲ್ಲಿ ಹೆಚ್ಚು ಒಪ್ಪುತ್ತೆ ಅನ್ನಿಸಿತು. ಇಂಗ್ಲೀಶನಲ್ಲಿ free, freedom ಆಗಿ ಮಾರ್ಪಾಡಾಗುವುದು ಸರಳ ಆದರೆ ಅದನ್ನೇ ತೋರಿಸಲು "ಸ್ವತಂತ್ರ" ಅನ್ನುವ ನೇರ ಅನುವಾದ ಕನ್ನಡಕ್ಕೆ ಒಗ್ಗುವುದಿಲ್ಲ ಅಂತಾ ನನಗನಿಸುತ್ತದೆ ೨) "ಯಾದೃಚ್ಚಿಕ" ಪದದಲ್ಲಿರುವ ತೊಡಕುಗಳು "ನೆರಕೆ" ಎಂಬ ಪದದಲ್ಲಿ ಇಲ್ಲ ಆದ್ದರಿಂದ ಮಂದಿಗೆ ಅದರ ಬಗ್ಗೆ ತಿಳಿಸಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಈಗಾಗಲೇ ಬಳಕೆಯಲ್ಲಿರುವ ಪದಗಳ ಜೊತೆಗೆ ಸರಳವಾದ/ತುಸು ಹೊಸದೆನಿಸುವ ಕನ್ನಡದ ಪದಗಳನ್ನು ತೋರಿಸುವುದೂ "ಕನ್ನಡ ವಿಕ್ಷನರಿ"ಯ ಗುರಿಯಲ್ಲೊಂದಾಗಬೇಕು. (ಕನ್ನಡವು ನಿಂತ ನೀರಾಗಬಾರದು) ಆದ್ದರಿಂದ "ಶಬ್ದಕೋಶ"ಕ್ಕಿಂತ "ಪದನೆರಕೆ" ಪದಕ್ಕೆ ನನ್ನ ಒಲವು ೩) ಮಾದರಿ/ತೋರುಪುಟ (template) ಬಗ್ಗೆ ಮಾತಾನಾಡುತ್ತಿರುವಾಗ ನನ್ನ ಇನ್ನೊಂದು ಅನಿಸಿಕೆ ಎಂದರೆ ಇಲ್ಲಿ ಹಲವಾರು ಇಂಗ್ಲೀಶ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬರೆಯಲಾಗಿದೆ. ಎತ್ತುಗೆಗೆ : ಫೈಲ್ ಅಪಲೋಡ್, ಲಾಗ್-ಇನ್/ಔಟ್ ಇತ್ಯಾದಿ, ಇವುಗಳನ್ನು ಕನ್ನಡವಾಗಿಸಿದರೆ ಹಲವರಿಗೆ ಅವು ಏನಂತ ಬೇಗನೆ ತಿಳಿಯುತ್ತವೆ (ಕಡತ ಸೇರಿಸುವಿಕೆ, ಒಳಬರುವು/ಹೊರನಡೆ...). ನಿಮ್ಮ ಅನಿಸಿಕೆ ತಿಳಿಸಿ. - ಪ್ರಶಾಂತ ಸೊರಟೂರ
ಪ್ರಶಾಂತ ಅವರೇ,
೧. Free ಅನ್ನು "ಸ್ವತಂತ್ರ" ಎಂಬ ಅರ್ಥದಲ್ಲಿ ಬಳಸಲಾಗಿದೆ. ವಿಕ್ಷನರಿ Free Dictionary ಆಗಿದೆಯೇ ಹೊರತು Open Dictionary ಅಲ್ಲ. Open ಆಗಿದ್ದಲ್ಲಿ ತೆರೆದ ಅಥವ ಮುಕ್ತ ಹೊಂದಿಕೊಳ್ಳುತ್ತಿತ್ತು.
೨. "ಯಾದೃಚ್ಚಿಕ" ಪದದಲ್ಲಿರುವ ಯಾವ ತೊಡಕುಗಳು "ನೆರಕೆ" ಪದದಲ್ಲಿಲ್ಲ ಎಂದು ದಯವಿಟ್ಟು ತಿಳಿಸಿ. ಜನರ ಬಳಕೆಯಲ್ಲಿರುವ ಮತ್ತು ಜನರಿಗೆ ಅರ್ಥವಗುವ ಪದನನ್ನು ಬಳಸಬೇಕೆನ್ನುವುದ್ದು ಉದ್ದೇಶ. ಹಾಗೆಯೇ, ಶಬ್ದಕೋಶ ಪದದಲ್ಲಿ ಯಾವ ತೊಡಕಿದೆಯೆಂದು ದಯವಿಟ್ಟು ತಿಳಿಸಿ.
೩. ಇಂಗ್ಲಿಷ್ ನಲ್ಲಿರುವ ಇತರ ಪದಗಳುನ್ನು ಕನ್ನಡಕ್ಕೆ ತರಬೇಕೆನ್ನುವುದನ್ನು ನಾನೂ ಒಪ್ಪುತ್ತೇನೆ.
-- ತೇಜಸ್ / ಚರ್ಚೆ/ ೦೪:೫೪, ೫ ಮೇ ೨೦೧೨ (UTC)
ತೇಜಸ್ ಅವರೇ, "ಮುಕ್ತ ಶಬ್ದಕೋಶ" ಅಂತಾ ಮುಖಪುಟದಲ್ಲಿ ಮಾರ್ಪಡಿಸಿದ್ದೀರಿ. "ಪದನೆರಕೆ" ನಿಮಗೆ ತುಂಬಾ ಹೊಸದು ಎನಿಸಿದರೆ ಅದು ಮಂದಿಗೆ ಗೊತ್ತಾಗುವವರೆಗೆ "ತೆರೆದ ಪದಕೋಶ" ಅಂತಾ ಬಳಸಬಹುದು. ಮೇಲೆ ಸಂದೀಪ ಅವರು ಬರೆದದಂತೆ ತೆರೆದ ಮತ್ತು ಮುಕ್ತ ಒಂದೇ ಹುರುಳು ಹೊಂದಿರುವಂತವು. "ತೆರೆದ" ಆಡುನುಡಿಯಲ್ಲಿ ಹೆಚ್ಚಾಗಿ ಕಾಣುವಂತದು - ಪ್ರಶಾಂತ ಸೊರಟೂರ
ಪ್ರಶಾಂತ ಅವರೇ, ದಯವಿಟ್ಟು ಮೇಲೆ ಹೇಳಿರುವ ಮೊದಲೆರಡು ಅಂಶಗಳಿಗೆ ತಮ್ಮ ಸಮಾದಾನವನ್ನು ತಿಳಿಸಿ. -- ತೇಜಸ್ / ಚರ್ಚೆ/ ೧೭:೦೮, ೧೫ ಮೇ ೨೦೧೨ (UTC)
ತೇಜಸ್ ಅವರೇ, ೧) ನಾ ಮೊದಲೇ ಬರೆದಂತೆ ಇಂಗ್ಲೀಷನಲ್ಲಿ "free" freedom ಆಗಿರುವುದನ್ನು ಕನ್ನಡಕ್ಕೆ "ಸ್ವತಂತ್ರ" ಅನ್ನುವುದು ಸರಿಹೊಂದುವುದಿಲ್ಲ. ೨) ನೆರಕೆ - ಆಡುನುಡಿಯಲ್ಲಿಯ ಪದಗಳಿಂದ ಉಂಟಾದ ಪದ (ಜಾತ್ರೆಗೆ ಸಾವಿರಾರು ಮಂದಿ "ನೆರ"ದಿದ್ದರು, ಹಾಗೇಯೆ ಇದು ಪದಗಳ "ನೆರ"ಕೆ ), "ಯಾದೃಚ್ಚಿಕ" ಏನಂತ ಹೇಳಿಕೊಟ್ಟರೂ ಅದರ ಕ್ಲಿಷ್ಟತೆಯಿಂದಾಗಿ ತಲೆಯಲ್ಲಿ ಹೆಚ್ಚು ಹೊತ್ತು ಉಳಿಯಲಾರದು - ಪ್ರಶಾಂತ ಸೊರಟೂರ.
೧. ಇದನ್ನು ದಯವಿಟ್ಟು ನೋಡಿ. ಇಲ್ಲಿ ಸರಿಹೊಂದುವ ಪ್ರಶ್ನೆಯಿಲ್ಲ, ಅರ್ಥದ ಪ್ರಶ್ನೆ.
೨. ಶಬ್ದಕೋಶ ಪದದಲ್ಲಿ ಯಾವ ತೊಡಕಿದೆಯೆಂದು ತಾವು ತಿಳಿಸಲಿಲ್ಲ. ನಾವು ತಲೆಬರಹಗಳಲ್ಲಿ ಜನರಿಗೆ ಈಗಾಗಲೇ ತಿಳಿದಿರುವ ಪದವನ್ನು ಉಪಯೋಗಿಸಬೇಕೆನ್ನುವುದು ನನ್ನ ಅಭಿಪ್ರಾಯ (ಇದನ್ನು ನೋಡಿ). ಪದನೆರಕೆ ಅನ್ನುವುದಕ್ಕಿಂತಾ ಶಬ್ದಕೋಶ, ನಿಘಂಟು, ಅರ್ಥಕೋಶ ಪದಗಳು ಜನಬಳಕೆಯಲ್ಲಿವೆ. -- ತೇಜಸ್ / ಚರ್ಚೆ/ ೧೪:೦೩, ೧೬ ಮೇ ೨೦೧೨ (UTC)
೧) ಅರ್ಥವನ್ನು ಕನ್ನಡಕ್ಕೆ ತರುವಾಗ ಅದು ಸ್ವತಂತ್ರ ಅಂತಾ ಆಗದು, ಹಿಂದಿಯ ವಿಕಿಪೀಡಿಯಾ ಪುಟ ನೋಡಿ, ಅಲ್ಲಿ ಮುಕ್ತ (ತೆರೆದ) ಅಂತಾ ಬಳಸಿದ್ದಾರೆ. ಈಗ ಇಂಗ್ಲೀಷ ವಿಕ್ಷನರಿ ನೋಡಿ ಅಲ್ಲಿ ಬರೆದಿರುವುದು "wiki based open content dictionary" 2) ಶಬ್ದಕೋಶ ಮತ್ತು ಪದಕೋಶ ಎರಡೂ ಒಂದೇ. "ಪದ" ಬಳಸಿದರೆ ಒಂದು "ಒತ್ತು" ತಪ್ಪಿಸಬಹುದು ಮತ್ತು ಅದು ಅನ್ನಲು ಸರಳವಾಗಿದೆ.
ನಾನು ಮೇಲೆ ನೀಡಿರುವ ಕೊಂಡಿಗಳ ಬಗ್ಗೆ ದಯವಿಟ್ಟು ತಮ್ಮ ಅಭಿಪ್ರಾಯವನ್ನು ತಿಳಿಸಿ. -- ತೇಜಸ್ / ಚರ್ಚೆ/ ೧೫:೪೯, ೧೬ ಮೇ ೨೦೧೨ (UTC)
ತೇಜಸ್ ಅವರೇ, ಕೊಂಡಿಗಳಲ್ಲಿರುವುದನ್ನು ಓದಿದ ಮೇಲೆಯೇ ನಾನು ಬರೆದದ್ದು.
ಪದಕೋಶ ಜನ ಬಳಕೆಯಲ್ಲಿದೆ. ಇದನ್ನು ಬಳಸಬಹುದು. -- ತೇಜಸ್ / ಚರ್ಚೆ/ ೦೫:೦೪, ೪ ಜೂನ್ ೨೦೧೨ (UTC)

ಹೊಸ ಪದವನ್ನು ಕಲಿಯುವುದು ತಪ್ಪಾ ? ತಮಗೆ ಬೇಕಾಗಿರುವ ಪದವನ್ನು ಆಯ್ಕೆ ಮಾಡಿ ಬೇರೆಯವರ ಈಳಿಗೆಯನ್ನು ಕಿತ್ತಿಕೊಳ್ಳುವುದು ಸರಿಯಲ್ಲ. ಆಡನುಡಿಯಲ್ಲಿ ಬಳಕೆ ಆಗುವ ಪದಗಳ ಬಗ್ಗೆ ನಿಮ್ಮ ಅರಿವು ಏನು ಇಲ್ಲ. ನಿಮ್ಮ ಈ ಕೆಲಸದಿಂದ ನಮ್ಮ ಮಂದಿ ಇದರಿಂದ ದೂರ ಹೋಗುವರು. ಕನ್ನಡದಲ್ಲೇ ಒಳ್ಳೆ ಪದಗಳ ಬಳಕೆ ಬಗ್ಗೆ ಯಾಕೆ ಹಿಂಜರಿಕೆ ? ಹೊಸ ಪದಗಳನ್ನು ಕಲಿಯುವುದು ದೊಡ್ಡತನ. ನೀವೊಬ್ಬರೆ ಅಲ್ಲ ಮಂದಿಯಲ್ಲಿ ಯಾವ ಪದ ಬಳಕೆ ಮಾಡುವುದರ ಬಗ್ಗೆ ತಿಳಿಸುವುದಕ್ಕೆ. ನೀವು ಎರವಲು ಪದಗಳ ಮೊರೆ ಹಿಡಿದು ಕನ್ನಡ ಕೊಲ್ಲುವವರಲ್ಲಿ ಒಬ್ಬರು. ನಿಮ್ಮ ಈ ಕೆಲಸ ನಮ್ಮ ಮಂದಿಗೆ ಬೇಕಿಲ್ಲ. ಆಡನುಡಿಯಿಂದ ದೂರ ಹೋಗುವುದು ಸರಿಯಲ್ಲ.

ಆಮೇಲೆ ಬರಿ ತಪ್ಪು/ಸರಿ, ತೊಡಕುಗಳು ಇಂತ ಮಾತುಗಳನ್ನು ಬಿಟ್ಟು ನಮ್ಮ ಮಂದಿಗೆ ಹೆಚ್ಚು ಒರೆಗಳನ್ನು ಗೊತ್ತು ಮಾಡಿಸುವುದರ ಬಗ್ಗೆ ಗಮನಹರಸಿ. ಕನ್ನಡದಲ್ಲಿ ಹೆಚ್ಚು ಒರೆಗಳಿದ್ದರೆ ಅದು ನಮ್ಮ ನುಡಿಯ ಹಿರಿಮೆ. ಸುಮ್ಮನೆ ಎಲ್ಲಾದಕ್ಕು ಸರಿ/ತಪ್ಪು, ಕುಂದು ಕೊರತೆ ಬರಿ ಇಂತ ಬಲೆಗಳಿಂದ ಹೊರ ಬಂದು ಒಮ್ಮೆ ನೋಡಿ. ಎಲ್ಲಾ ಅಯ್ಕೆಗಳಿಗೆ ಬೆಲೆ ಸಿಗಲಿ. ಬರಿ ಕೆಲವು ಆಯ್ಕೆಗಳಿಗೆ ಅಲ್ಲ.
- 116.202.159.211

ಅನಾಮಧೇಯ ಸದಸ್ಯರೇ, ತಮ್ಮ ಗುರುತನ್ನು ಹೇಳಿಕೊಳ್ಳದೆ ನನ್ನ ಮೇಲೆ ಆರೋಪಹೊರಿಸಿರುವುದರಬಗ್ಗೆ ನಾನು ಉತ್ತರಿಸಬೇಕೆಂದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿಯೇ ಅನಾಮಧೇಯರಾಗಿದ್ದೀರೆಂಬುದು ಸ್ಪಷ್ಟ. ಈ ಕಾರಣದಿಂದಾಗಿ ನಿಮ್ಮ ಸಂದೇಶಕ್ಕೆ ಉತ್ತರಿಸುತ್ತಿದ್ದೇನೆ.
>>ಹೊಸ ಪದವನ್ನು ಕಲಿಯುವುದು ತಪ್ಪಾ ?
- ತಪ್ಪಲ್ಲ. ನೀವು ಕಲಿಯಬೇಡಿಯೆನ್ನಲು ನಾನಾರು?
>>ತಮಗೆ ಬೇಕಾಗಿರುವ ಪದವನ್ನು ಆಯ್ಕೆ ಮಾಡಿ ಬೇರೆಯವರ ಈಳಿಗೆಯನ್ನು ಕಿತ್ತಿಕೊಳ್ಳುವುದು ಸರಿಯಲ್ಲ.
- ಒಪ್ಪುತ್ತೇನೆ. ನಾನೂ ಅದನ್ನೇ ಹೇಳುತ್ತಿರುವುದು. ಜನಬಳಕೆಯಲ್ಲಿರುವ ಪದವನ್ನು ಬಳಸೋಣ ಅಂತ.
>>ಆಡನುಡಿಯಲ್ಲಿ ಬಳಕೆ ಆಗುವ ಪದಗಳ ಬಗ್ಗೆ ನಿಮ್ಮ ಅರಿವು ಏನು ಇಲ್ಲ.
- ನನ್ನ ಅರಿವಿನ ಬಗ್ಗೆ ನಿಮ್ಮ ಪ್ರಮಾಣಪತ್ರ ಬೇಕಿಲ್ಲ.
>>ನಿಮ್ಮ ಈ ಕೆಲಸದಿಂದ ನಮ್ಮ ಮಂದಿ ಇದರಿಂದ ದೂರ ಹೋಗುವರು.
- ನಿಮ್ಮ ಮಂದಿಯೆಂದರೆ ಯಾರು? ಜನಬಳಕೆಯಲ್ಲಿರುವ ಪದಬಳಕೆಯಿಂದ ಜನರು ದೂರ ಹೋಗುವುದಿಲ್ಲ.
>>ಕನ್ನಡದಲ್ಲೇ ಒಳ್ಳೆ ಪದಗಳ ಬಳಕೆ ಬಗ್ಗೆ ಯಾಕೆ ಹಿಂಜರಿಕೆ ?
- ಯಾವುದೇ ಹಿಜರಿಕೆ ಇಲ್ಲ. ಅನ್ಯದೇಶೀಯಪದಗಳು ಕನ್ನಡದ್ದಲ್ಲವೆಂದವರು ಯಾರು?
>>ಹೊಸ ಪದಗಳನ್ನು ಕಲಿಯುವುದು ದೊಡ್ಡತನ.
- ಎಲ್ಲಿ ಇಲ್ಲವೆಂದಿದ್ದೇನೆ. ದಾರಾಳವಾಗಿ ದೊಡ್ಡವರಾಗಿ.
>>ನೀವು ಎರವಲು ಪದಗಳ ಮೊರೆ ಹಿಡಿದು ಕನ್ನಡ ಕೊಲ್ಲುವವರಲ್ಲಿ ಒಬ್ಬರು.
- ಅನಾಮಧೇಯ ಸದಸ್ಯರಾಗಿ ಈರೀತಿ ಆರೋಪಿಸುತ್ತಿರುವುದು ನೋಡಿದರೆ ನಿಮ್ಮ ಬಗ್ಗೆ ನಿಮಗೆ ಅಭಿಮಾನವಾಗಲೀ, ನಂಬಿಕೆಯಾಗಲೀ ಇಲ್ಲವೆಂದು ತೋರುತ್ತಿದೆ. ಉಪಯೋಗಿಸುವ ಪದಗಳ ಬಗ್ಗೆ ಹಿಡಿತವಿರಲಿ. ಇದು ಉತ್ತವ ಚರ್ಚೆಯ ಲಕ್ಷಣವಲ್ಲ
>> ನಿಮ್ಮ ಈ ಕೆಲಸ ನಮ್ಮ ಮಂದಿಗೆ ಬೇಕಿಲ್ಲ.
- ನಾನು ಮಾಡುತ್ತಿರುವುದು ಕನ್ನಡಿಗರಿಗಾಗಿ. ಅವರು ನಿಮ್ಮವರಲ್ಲದಿದ್ದರೆ ನನಗೆ ಅದರ ಬಗ್ಗೆ ಚಿಂತೆಯಿಲ್ಲ
>>ನಮ್ಮ ಮಂದಿಗೆ ಹೆಚ್ಚು ಒರೆಗಳನ್ನು ಗೊತ್ತು ಮಾಡಿಸುವುದರ ಬಗ್ಗೆ ಗಮನಹರಸಿ.
- ನನ್ನ ಕೆಲಸದ ಬಗ್ಗೆ ವಿರ್ದೇಶಿಸುವ ಯಾವುದೇ ಅಧಿಕಾರ ನಿಮಗಿಲ್ಲ. ತಪ್ಪು/ಸರಿ, ತೊಡಕುಗಳ ಬಗ್ಗೆ ಮಾತಾಡುವುದು ತಪ್ಪಲ್ಲ.
>>ಎಲ್ಲಾ ಅಯ್ಕೆಗಳಿಗೆ ಬೆಲೆ ಸಿಗಲಿ. ಬರಿ ಕೆಲವು ಆಯ್ಕೆಗಳಿಗೆ ಅಲ್ಲ
- ಅದನ್ನೇ ನಾನೂ ಹೇಳುತ್ತಿರುವುದು.
-- ತೇಜಸ್ / ಚರ್ಚೆ/ ೦೪:೩೯, ೫ ಜೂನ್ ೨೦೧೨ (UTC)

ತೇಜಸ್ ಅವರೇ, ನೀವು ಕನ್ನಡ ವಿಕಿಪೀಡಿಯಾಗೆ/ವಿಕ್ಶನರಿಗೆ ಕೆಲಸ ಮಾಡುತ್ತಿರುವುದು ತುಂಬಾ ಮೆಚ್ಚುವಂತದ್ದು. ಹೀಗೆ ಮುಂದುವರಿಯಲಿ. "ಪದನೆರಕೆ/ಶಬ್ದಕೋಶದ" ಸಲುವಾಗಿ ನನ್ನ ಕೆಲವು ಅನಿಸಿಕೆಗಳು, ೧. ಹೂ ನಿಜ ಕನ್ನಡದಲ್ಲಿ "ಶಬ್ದಕೋಶ" ಬಳಕೆಯಲ್ಲಿ ಇದೆ, ಅದರ ಬಳಕೆ ಸರಿಯಾಗಿದೆ. ಆದರೆ " ಪದನೆರಕೆ " ಅಂತ ಹೊಸ ಪದವನ್ನು ಕೂಡ ನಮ್ಮ ಮಂದಿಗೆ ಪರಿಚಯ ಮಾಡಿಸುವುದು ಕೂಡ ನಾವು ಯಾಕೆ ಮಾಡಬಾರದು ? ನಮ್ಮ ಮಂದಿಯ ಮುಂದೆ ಎಲ್ಲಾ ಅಯ್ಕೆಗಳನ್ನು ಇಡೋಣ. ಒಂದು ಅಯ್ಕೆ ಅಂತ ನಾವು ಅವರ ಮುಂದೆ ಇಡುವುದು ಇನ್ನೊಂದ ಆಯ್ಕೆಯ ತಪ್ಪು/ತೊಡಕಿನಿಂದ ಅಂತ ನಾವು ನೋಡದು ಬೇಡ ಅಂತ ನನ್ನ ಸಣ್ಣ ಕೋರಿಕೆ. ಕನ್ನಡ ನುಡಿಯಲ್ಲಿ ಒಂದು ಪದಕ್ಕೆ ತುಂಬಾ ಆಯ್ಕೆಗಳಿವೆ ಅಂತ ಒಂದು ಹೊಸ ಹುರುಪು ಹಾಗು ನಂಬಿಕೆ ಮೂಡಿಸಿದರೆ ಒಳ್ಳೆಯದು ಅಲ್ವಾ ? ನಿಮ್ಮ ಒಳ್ಳೆ ಕೆಲಸಕ್ಕೆ ನನ್ನ ಮೆಚ್ಚುಗೆಗಳು. ೨. ಹೂ, ಪದನೆರಕೆ ಪದವು ಇನ್ನು ಹೊಸ ಪದವು, ಈಗ ಬಳಕೆ ಅಲ್ಲಿ ಕಡಿಮೆ, ಒಪ್ಪುತ್ತೇನೆ ? ಆದರೆ ಒಂದು ಮಗುವು ಇವತ್ತು ಏನು ಮಾಡದ್ದಿದ್ದರೆ ಮುಂದಕ್ಕೆ ಒಳ್ಳೆ ಕೆಲಸ ಮಾಡಬಹುದಲ್ವಾ ? ಹಾಗೆ ಒಂದು ಹೊಸ ಪದವನ್ನು ನಾವು ಮಗುವಿನ ಹಾಗೆ ಬೆಳಸಬೇಕು. ಒಮ್ಮೆ ಯೋಚಿಸಿ, ಪದನೆರಕೆ/ಶಬ್ದಕೋಶ ಎರಡು ಆಯ್ಕೆಗಳಿಗೆ ಒಂದಿಷ್ಟು ಹೊತ್ತು ನೀಡಿ ನಮ್ಮ ಮಂದಿ ಮುಂದೆ ಇಡೋಣ. ಇದು ನನ್ನ ಅನಿಸಿಕೆ. ಹೀಗೆ ನಮ್ಮ ಗುಣಮಟ್ಟದ ಚರ್ಚೆಗಳು ಮುಂದುವರಿಯಲಿ ಅನ್ನುವುದು ನನ್ನ ಬಯಕೆ.

- ನಿಮ್ಮ, ವಿವೇಕ್ ಶಂಕರ್

Invite to WikiConference India 2011 ಸಂಪಾದಿಸಿ

 

Hi Teju2friends,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.(last date for submission is 15 August 2011)

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011