No first-letter capital please ಸಂಪಾದಿಸಿ

Please keep your English entries without a first-letter capital. This is the rule followed in most Wiktionaries, and by other collaborators here. --192.163.20.232 ೦೪:೧೨, ೮ ಆಗಸ್ಟ್ ೨೦೦೯ (UTC)

ದಯವಿಟ್ಟು ಒಂದು ಪದಕ್ಕೆ ಅದೇ ಪದವನ್ನು ಅರ್ಥವಾಗಿ ಹಾಕಬೇಡಿ ಸಂಪಾದಿಸಿ

ಕನ್ನಡ ವಿಕ್ಷನರಿಗೆ ನಿಮ್ಮ ಕೊಡುಗೆಗಾಗಿ ಧನ್ಯವಾದಗಳು. ಎರಡು ವಿಷಯಗಳನ್ನು ನಿಮ್ಮ ಗಮನಕ್ಕೆ ತರಲು ಬರೆಯುತ್ತಿದ್ದೇನೆ: (ಅ) ಇತ್ತೀಚೆಗೆ ನೀವು ಹಾಕುತ್ತಿರುವ ಪದಗಳಲ್ಲಿ ಒಂದು ಪದಕ್ಕೆ ಅದೇ ಪದವನ್ನು ಅರ್ಥವಾಗಿ ಹಾಕುತ್ತಿದ್ದೀರಿ, ಮತ್ತು (ಆ) ಅದರ ಬಳಕೆಯ ವಾಕ್ಯಕ್ಕೆ "ಉದಾಹರಣೆಪದ ಬಳಸುವ ವಾಕ್ಯ" ಎಂದೇ ಎಲ್ಲಾ ಕಡೆ ಹಾಕುತ್ತಿದ್ದೀರಿ. ಈ ಎರಡು ಕಡೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ವಿಕ್ಷನರಿಯ ಗುಣಮಟ್ಟವನ್ನು ಕಾಪಾಡುವುದರಲ್ಲಿ ನೆರವಾಗುತ್ತೀರಿ ಎಂದು ನಂಬಿದ್ದೇನೆ.--ಕಿರಣ ೧೭:೦೧, ೩ ಸೆಪ್ಟೆಂಬರ್ ೨೦೦೯ (UTC)

ಇಂಗ್ಲಿಶ್ ಪದಗಳಿಗೆ ಇಂಗ್ಲಿಶ್ ವಿಕ್ಷನರಿ ಲಿಂಕನ್ನು ಕೊಡಿ ಸಂಪಾದಿಸಿ

ಕನ್ನಡ ಪದಗಳಿಗೆ ಇಂಗ್ಲೀಶ್ ಪದಗಳ ಲಿಂಕನ್ನು ಕೊಡುವಾಗ ಇಂಗ್ಲಿಶ್ ವಿಕ್ಷನರಿಗೂ ಲಿಂಕನ್ನ ಕೊಡಿ. ಉದಾಹರಣೆಗೆ: ಕಟ್ಟು ಪುಟದಲ್ಲಿ package ಲಿಂಕನ್ನ ಮಾತ್ರ ಕೊಡಲಾಗಿತ್ತು en:package ಲಿಂಕನ್ನು ಕೊಟ್ಟಿರಲ್ಲಿಲ್ಲ. ನಾನು ಈಗ ಸೇರಿಸಿದ್ದೇನೆ. ಸಮುದಾಯದ ಪುಟದಲ್ಲಿ ವಿಕ್ಷನರಿಗೆ ಪುಟಗಳನ್ನು ಸೇರಿಸುವಾಗ ಬಳಸಬೇಕಾದ ಕೋಡನ್ನು ಕಿರಣ ಅವರು ಹಾಕಿದ್ದಾರೆ. ಅದಕ್ಕೆ ಉದಾಹರಣೆಗಳನ್ನ ನಾನು ಸೇರಿಸಿದ್ದೇನೆ. ಒಮ್ಮೆ ಅದನ್ನು ನೋಡಬಹುದು. ಉಪಯೋಗವಾಗುತ್ತದೆ. --ಸಂಜೀವ

ಉದಾಹರಣೆಪದ ಎಂಬ ಜಾಗದಲ್ಲಿ ಪುಟದ ಹೆಸರನ್ನು ಹಾಕಿ ಸಂಪಾದಿಸಿ

ವಿಕ್ಷನರಿಯಲ್ಲಿಯ ನಿಮ್ಮ ಕೊಡಿಗೆಗಳಿಗೆ ನಮ್ಮ ಅಭಿನಂದನೆಗಳು. ನೀವು ಹಾಕಿರುವ ಪುಟಗಳಲ್ಲಿ ಉದಾಹರಣೆ ಪದ ಎಂಬ ಜಾಗದಲ್ಲಿ ನೀವು ಸೇರಿಸಿದ ಪುಟದ ಹೆಸರನ್ನು ಕೊಡಿ. ಉದಾಹರಣೆಗೆ ಇತ್ತೀಚೆಗೆ ನೀವು ಸೇರಿಸಿರುವ ಹನ್ನೆರಡು ಎಂಬ ಪುಟದಲ್ಲಿ, ನಾಮಪದದ ಕೆಳಗೆ ಉದಾಹರಣೆಪದ ಎಂದು ಇದೆ. ಉದಾಹರಣೆಪದ ಎಂಬ ಜಾಗದಲ್ಲಿ ಹನ್ನೆರಡು ಎಂದು ಮಾಡಿ. ಇದೇ ರೀತಿ ನಿಮ್ಮ ಮುಂದಿನ ಹೊಸ ಪುಟಗಳಿಗೂ ಈ ಕ್ರಮವನ್ನು ಬಳಸಿ. ಒಮ್ಮೆ ಸಮುದಾಯ ಪುಟ ದಲ್ಲಿ ಇರುವ ಉದಾಹರಣೆಗಳನ್ನು ನೋಡಿ. ಧನ್ಯವಾದಗಳು --ಸಂಜೀವ