ನಮಸ್ಕಾರ! ಸಂಪಾದಿಸಿ

ಇದು ಕಿರಣನ ವಿಕ್ಷನರಿ ಮನೆ. ಕನ್ನಡದ ವಿಕ್ಷನರಿಯನ್ನು ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಹಾಕುವ ಒಂದು ತಾಣವಾಗಿ ಮಾರ್ಪಡಿಸುವ, ಮತ್ತು ಈಗಾಗಲೇ ಕನ್ನಡದಲ್ಲಿರುವ ಅಪಾರವಾದ ಪದಸಂಪತ್ತನ್ನು ಒಂದೆಡೆ ಕಲೆಹಾಕುವ ಹಿರಿದಾದ ಒಂದು ಯೋಜನೆಯ ರೂಪುರೇಷೆಗಳನ್ನು ಈಗ ತಯಾರಿಸುತ್ತಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಿ.--ಕಿರಣ ೦೬:೧೨, ೬ ಜೂನ್ ೨೦೦೯ (UTC)

ಬನವಾಸಿ ಬಳಗದ ಕನ್ನಡ ವಿಕ್ಷನರಿ ಯೋಜನೆ ಸಂಪಾದಿಸಿ

ಕನ್ನಡ ವಿಕ್ಷನರಿಯಲ್ಲಿ ಹೆಚ್ಚು ಹೆಚ್ಚು ಕನ್ನಡದ ಪದಗಳನ್ನು ತುಂಬುವ ಒಂದು ಯೋಜನೆಯನ್ನು ಬನವಾಸಿ ಬಳಗ [೧] ಕೈಗೆತ್ತಿಕೊಂಡಿದೆ. ಈ ಯೋಜನೆಯಲ್ಲಿ ಬಳಗದ ಬೇರೆಬೇರೆ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ೬ ಮಂದಿ ವಾರಕ್ಕೆ ಕಡಿಮೆಯೆಂದರೆ ೩ ಗಂಟೆಗಳನ್ನು ಕೊಡಲು ಮುಂದೆ ಬಂದಿದ್ದಾರೆ. ಈ ಯೋಜನೆಯನ್ನು ಬನವಾಸಿ ಬಳಗದವರೇ ಮಾಡಬೇಕು ಎಂದೇನೂ ಇಲ್ಲವೆಂದು ನಿಮಗೆ ಗೊತ್ತೇ ಇದೆ. ಆದ್ದರಿಂದ ನೀವು ಯಾರೇ ಆಗಿರಲಿ, ಕನ್ನಡವು ವಿಕ್ಷನರಿಯಲ್ಲಿ ಕಂಗೊಳಿಸಬೇಕೆಂಬ ಆಸೆ ನಿಮ್ಮದಾಗಿದ್ದರೆ, ಅಂತರ್ಜಾಲದಲ್ಲಿ ಕನ್ನಡದ ಶಕ್ತಿಯನ್ನು ತೋರಿಸಬೇಕು ಎಂಬುದು ನಿಮ್ಮ ಆಸೆಯಾಗಿದ್ದರೆ, ಈ ಯೋಜನೆಗೆ ಸೇರಿಕೊಳ್ಳಿ! ಸೇರಿಕೊಳ್ಳಲು ನೀವು ಮಾಡಬೇಕಾಗಿರುವುದು ಇಷ್ಟೇ: ಸಮುದಾಯ ಪುಟವನ್ನು [೨] ಓದಿ, ಅದರಲ್ಲಿರುವ ಕಟ್ಟಳೆಗಳನ್ನು ಪಾಲಿಸುತ್ತ ಪದಗಳನ್ನು ಸೇರಿಸುತ್ತ ಹೋಗುವುದು. ಅಷ್ಟೇ!--ಕಿರಣ ೦೭:೫೫, ೮ ಜೂನ್ ೨೦೦೯ (UTC)