ಹಡು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹಡು
ಅರ್ಥ : ಹಡು ಎಂಬುದು ಸಂಭೋಗ ಪದದ ಪರ್ಯಾಯ ಅಚ್ಚ ಕನ್ನಡ ಪದ. ಹಡು ಅಂದರೆ ಹೆಣ್ಣು ಗಂಡಿನ ಸಮ್ಮಿಲನ, ದೇಹ ಸಂಬಂಧ, ಒಂದಾಗುವಿಕೆ ಎಂದೆಲ್ಲಾ ಹೇಳಬಹುದಾದರೂ ಹಡು ಎಂಬ ಪದ ಒಂದು ವಿಶೇಷ ಅರ್ಥವನ್ನು ಸ್ಪುರಿಸುತ್ತದೆ. ಅಂದರೆ ಹೆಣ್ಣು ಗಂಡಿನ ಮಿಲನವನ್ನು ವ್ಯಕ್ತ ಪಡಿಸಿದರೂ ಒಂದಾಗುವಿಕೆಯಲ್ಲಿ ಗಂಡಸಿನ ಕೆಲಸವನ್ನು ಹೆಚ್ಚಾಗಿ ಧ್ವನಿಸುತ್ತದೆ. ಉದಾ : ಅವನು ಹಡುತ್ತಿದ್ದನು. ಅವನು ಹಡಲು ಮುಂದಾದನು. ಆದರೆ ಅವಳು ಹಡುತ್ತಿದ್ದಳು ಎಂದು ಹೇಳಲು ಸಾಧ್ಯವಿಲ್ಲ. ಬದಲಿಗೆ "ಅವಳು ಹಡಿಸಿಕೊಂಡಳು" ಎಂದು ಹೇಳಬಹುದು. ಅಂದರೆ ’ಹಡು’ ಎಂಬ ಪದ ಗಂಡಿನ ಕ್ರಿಯೆಗೆ ಸಂಬಂಧಿಸಿದೆ.