ಹಾಲಕ್ಕಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹಾಲಕ್ಕಿ
- ಉಳಿಗ,ಶಕುನದ ಹಕ್ಕಿ
- __________________
ಅನುವಾದ
ಸಂಪಾದಿಸಿ- English: bird of omen, en:bird of omen
ನಾಮಪದ
ಸಂಪಾದಿಸಿಹಾಲಕ್ಕಿ
- _______________
ಅನುವಾದ
ಸಂಪಾದಿಸಿ- English: omen bird, en:omen bird
ಹಾಲಕ್ಕಿ, Spotted Owlet Athene brama. [21 ಸೆಂ.ಮೀ.] ಸ್ಥಳೀಕ. ಜನಸಾಮಾನ್ಯರಿಗೆ ಹೆಚ್ಚಿನ ಪರಿಚಿಯವಿರುವ ಗೂಬೆ. ಕಿವಿಗುಚ್ಛವಿಲ್ಲ. ಗೋರವಂಕಕ್ಕಿಂತ ಗಾತ್ರದಲ್ಲಿ ಚಿಕ್ಕದು. ಬಿಳಿ ಮಚ್ಚೆಯಿಂದಾವೃತ್ತ ಬೂದು ಗೂಬೆ. ಸಾಮಾನ್ಯವಾಗಿ ದಟ್ಟ ಕಾಡನ್ನು ಹೊರತು ಪಡಿಸಿ ನಾಡಿನ ಎಲ್ಲೆಡೆ ಕಾಣಸಿಗುತ್ತದೆ. ಜೋಡಿಯಾಗಿ ಇಲ್ಲವೇ ಸಂಸಾರದೊಂದಿಗೆ ಕಾಣಿಸಿಕೊಳ್ಳುತ್ತದೆ. ಬೇರೆ ಗೂಬೆಗಳಂತಲ್ಲದೆ ಅಪರೂಪಕ್ಕೆ ಹಗಲಿನಲ್ಲಿಯೂ ಆಹಾರ ಹುಡುಕುತ್ತಾ ಮನೆಗಳ ಸುತ್ತಮುತ್ತ ಸುಳಿಯುತ್ತದೆ. ದೀಪದ ಮಬ್ಬಿನ ಬೆಳಕಿನಲ್ಲಿ ಹಾರಾಡುವ ಕೀಟಗಳನ್ನು ಹಿಡಿಯುವುದನ್ನು ಸಾಮಾನ್ಯವಾಗಿ ನಗರದ ಹೊರವಲಯಗಳಲ್ಲಿ ನೋಡಬಹುದು. ಹೆಚ್ಚಿನಂಶ ಜೀರುಂಡೆ, ದುಂಬಿಯಂತಹ ಕೀಟಗಳು ಆಹಾರ. ತಲೆ ಅಲ್ಲಾಡಿಸುವುದು ಮತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪರಿ ಚೆಂದ. ಬುಡುಬುಡಿಕೆ ದಾಸರು ಹಾಲಕ್ಕಿಯ ಕೀಚು ಕೂಗನ್ನು ಅರ್ಥಮಾಡಿಕೊಂಡು ಮುಂದಿನ ಭವಿಷ್ಯವನ್ನು ಮನೆಮನೆಗೆ ತಿಳಿಸುತ್ತಿದ್ದ ಕಾಲವೊಂದಿತ್ತು!