ಕನ್ನಡದಲ್ಲಿ ಹಣದ ಬಗ್ಗೆ ಮಾಹಿತಿ ಕಡಿಮೆ. ಪತ್ರಿಕೆಗಳು, ಟಿ.ವಿ ಮಂದಿ ಬಳಸುವ ಕನ್ನಡ ಎಲ್ಲವೂ ಹೆಚ್ ಡಿ ಕುಮಾರಸ್ವಾಮಿ ಬಳಸುವ ಕನ್ನಡದಂತೆ.
ದಟ್ಸ್ಕನ್ನಡದಲ್ಲಿ ಜಾನಕಿ ಕಾಲಂ ನಲ್ಲಿನ, ಮಾಸ್ತಿ-ಭೈರಪ್ಪ-ಕೆ.ಟಿ.ಗಟ್ಟಿ-ವಸುಧೇಂದ್ರ ಬಳಸುವ ಸರಳ ಕನ್ನಡ ನನಗಿಷ್ಟ.
ಕನ್ನಡವನ್ನ ಶಾಲೆಯಲ್ಲಿ ಓದುವ ಮಕ್ಕಳು, ಅವರಿಗೆ ಪಾಠ ಮಾಡುವ ಮೇಷ್ಟ್ರುಗಳು, ಅವರಿಗೆ ಪುಸ್ತಕ ನಿಗದಿ ಮಾಡುವ ಸಮಿತಿ-ಸರ್ಕಾರ-ಹಿರಿಯರು, ಇವರ ಮೇಲೆ ಕನ್ನಡವನ್ನ ಕಡ್ಡಾಯ ಮಾಡೋ ಆತುರ ತೋರೋ ಹಿರಿಯರು ಇವರೆಲ್ಲ ಮರೆಯೋ ಒಂದು ಅಂಶ ಅಂದ್ರೆ, ಕಡ್ಡಾಯ ಮಾಡಿದ ಯಾವ ವಿಷಯವೂ ಖುಷಿ ಕೊಡೋಲ್ಲ.
ನಾವೆಲ್ಲ ಸಂಪತ್ತಿಗೆ ಸವಾಲ್ ಹಾಡುಗಳ್ನ, ಎರಡು ಕನಸು ಹಾಡುಗಳ್ನ ಕಡ್ಡಾಯ ಮಾಡಿದ್ದಕ್ಕೆ ಚೆನ್ನಾಗಿ ಕಲಿತೆವಾ? ಇಲ್ಲಾ, ಅವು ಮನಕ್ಕೆ ಮುದ ಕೊಡ್ತಾ ಇದ್ವು ಅದಕ್ಕೆ. ನಾವು ಬಳಸೋ ಪದಗಳು ಮನಕ್ಕೆ ಮುದ ಕೊಡ್ಬೇಕು. ಅಂಥ ಪದ ಕನ್ನಡದ ಮಟ್ಟಿಗೆ ಸೆಂಚುರಿ ಗೌಡ ಅನಿಸಿರೋ ಡಾ. ಜಿ. ವೆಂಕಟಸುಬ್ಬಯ್ಯನವರ ಕನ್ನಡದಲ್ಲಿ ಇಲ್ಲ. ಅವನ್ನ ನಮ್ಮ ಆಡುಮಾತಿನಿಂದಲೇ ಸೇರಿಸಬೇಕು.
ಇದು ಸಾಧ್ಯ ಇಲ್ಲ ಅನ್ನುವ ಮಂದಿಗೆ ಒಂದೇ ಪ್ರಶ್ನೆ.
ಕಡೆಯ ಹತ್ತು ವರ್ಷದಲ್ಲಿ Ulsoor ಹಲಸೂರು ಹೇಗಾಯಿತು? ಬಳಸಿ, ಬಳಸಿ, ಬಳಸಿ ತಾನೇ? ಹಾಗೆಯೇ, ಬೇಲ್ಗಾಂ ಅನ್ನ ಬೆಳಗಾವಿ ಮಾಡಬಹುದು.
ಕಡೆ ಪಕ್ಷ ವೈಟ್ ಫೀಲ್ಡ್ ಅನ್ನ ಪಟ್ಟಂದೂರು ಅಗ್ರಹಾರ ಅಂತ ಕರೆಯಲಿಕ್ಕೆ ಶುರು ಮಾಡಬಹುದು.
ನೆನಪಿಡೋಣ, ಇಂದಿಗೂ ಬೆರಕೆ ಸೊಪ್ಪಿನ ದೇಶ ಅಮೇರಿಕದಲ್ಲಿ ಸ್ಯಾನ್ ಅನ್ನೋದು ಇದ್ದೇ ಇದೆ.
ನಮ್ಮಲ್ಲೇ ಸಮುದ್ರಗಳು ಸಂದ್ರ ಆಗಿರೋದು. (ದೇವಸಮುದ್ರ = ದೇವಸಂದ್ರ, ಕ್ಯಾತ್ಸಸಮುದ್ರ = ಕ್ಯಾತ್ ಸಂದ್ರ)...
ಇನ್ನು ನಾವು ನಮ್ಮ ಬೋರವಳ್ಳಿ (ಮುಂಬೈ ನ ಬೋರಿವಿಲಿ), ಚಂದವಳ್ಳಿ (ಛಾಂದಿವಿಲಿ)... ಇವನ್ನೆಲ್ಲಾ ಯಾವಾಗ ನಮ್ಮದಾಗಿಸಿಕೊಳ್ಳೋದು?
ಸೇರಿಸ್ತಾ ಹೋಗ್ತೇನೆ, ಆದಷ್ಟ್ ದಿನ. ೧೧:೦೨, ೧೬ ಡಿಸೆಂಬರ್ ೨೦೧೭ (UTC)
- capital
- capitalism
- entreprenuership
- social
- socialism
- society
- community
- communism
- profit
- loss
- statement
- finance
- financial
- legacy
- popular
- populism
- mob
- mobocracy
- khakistrocracy
- bond
- junk bond
- penny
- penny stock
- stock
- share
- debenture
- stake
- table stakes
- keeps
- takes