ಸಂಘಟನೆ
ಅಂಬೇಡ್ಕರ್ ಸೇವಾ ಸಮಿತಿಯ ಹುಟ್ಟು, ನಾಡಿನ ದಲಿತ ಪರ ಹೋರಾಟಕ್ಕೆ, ಬಡವರ ಪರ ಚಿಂತನೆಗೆ ಹೊಸ ತಿರುವು ನೀಡುವ ಮೂಲಕ ಆರಂಭವಾಗಿದೆ. ಸಂಘಟನೆಯ ಬೆಳವಣಿಗೆ, ವ್ಯಾಪ್ತಿ, ವಿಸ್ತಾರ, ಕೆಚ್ಚು, ಧ್ಯೇಯ – ಉದ್ದೇಶ, ನೀತಿ-ನಿಲುವು, ಹೋರಾಟಗಳು ದಲಿತ ಮತ್ತು ಬಡವರ ಸಮಗ್ರ ಅಭಿವೃದ್ಧಿಯ ಕುರಿತು ದಲಿತರ ಆಷಾಕಿರಣವಾಗಲು ನಿಮ್ಮೆಲ್ಲರ ಕೊಡುಗೆ ಅಪಾರವಾದದ್ದು. ಬನ್ನಿ, ಈ ನಮ್ಮ ನಿಮ್ಮೆಲ್ಲರ ಸಮಿತಿಯ ಉದ್ದೇಶಗಳನ್ನು ಅರಿಯೋಣ…
ದಲಿತರಲ್ಲಿ ಮೊಟ್ಟಮೊದಲನೆಯದಾಗಿ ವಿಶ್ವ ಮಾನವ ಎನ್ನಿಸಿಕೊಂಡ ಅಂಬೇಡ್ಕರ್ ಅವರ ಕಷ್ಟ ಮತ್ತ ದಲಿತರಿಗೋಸ್ಕರ ಮಾಡಿದ ತ್ಯಾಗಗಳನ್ನು ಹಾಗೂ ಅನುಕೂಲಗಳನ್ನು ದಲಿತರಿಗೆ ತಿಳಿಸುವಂತ ಕೆಲಸ ಮಾಡಬೇಕೆಂದು ಜನವರಿ ೧೩ ೨೦೧೭ ರಂದು ಸಮಿತಿಯನ್ನು ರಚಿಸಲಾಯಿತು.
ನಮ್ಮ ಕಾರ್ಯಕರ್ತರಲ್ಲಿ ಕಿಚ್ಚು ಮತ್ತು ಕೆಚ್ಚುಗಳಿಗೇನೂ ಕೊರತೆಯಿರಲಿಲ್ಲ. ದಲಿತರ ದೇಶದಲ್ಲಿ ಮತ್ತೆ ದಲಿತರು ರಾಜ್ಯ ಆಳಬೇಕು ಎಂಬ ಪ್ರತಿಷ್ಠಾಪಿಸುವ ದಿಟ್ಟವಾದ ಪಣತೊಟ್ಟು ಹೆಜ್ಜೆಹೆಜ್ಜೆಯಾಗಿ ಸಂಘಟನೆಯನ್ನು ಬೆಳೆಸುತ್ತಿದ್ದೇವೆ, ನಮ್ಮ ಸಂಘಟನೆಯೂ ರಾಜ್ಯದ ಮೂಲೆಮೂಲೆಗಳಲ್ಲೂ ಶಾಖೆಗಳನ್ನು ಆರಂಭಿಸುವ ಸಂಪ್ರದಾಯವನ್ನು ಹುಟ್ಟುಹಾಕಿದ್ದೂ, ದಲಿತರ ನೀಲಿ ಬಾವುಟವನ್ನು ದಲಿತರ ಹೆಗಲ ಮೇಲಿನ ಹೆಮ್ಮೆಯ ಕುರುಹಾಗಿ ಧರಿಸುವ ಸಂಪ್ರದಾಯವನ್ನು ಹುಟ್ಟುಹಾಕಿರುವುದು ಅಂಬೇಡ್ಕರ್ ಸೇವಾ ಸಮಿತಿ. ಹೀಗೆ ತನ್ನ ಹೊಸತನದ ಯೋಚನೆ ಮತ್ತು ಯೋಜನೆಗಳಿಂದ ದಲಿತರನ್ನು ಒಗ್ಗೂಡಿಸುತ್ತಾ, ಸಂಘಟನೆಯಾಗಿ ರಾಜ್ಯವ್ಯಾಪಿ ವಿಸ್ತರಿಸುತ್ತಾ ಬೆಳೆಯಲು ಹೊಸದಾದ ಚಳವಳಿಯೊಂದನ್ನೇ ಅಂಬೇಡ್ಕರ್ ಸೇವಾ ಸಮಿತಿ ಹುಟ್ಟು ಹಾಕಿದೆ. ದಲಿತರ ಪಡೆಯಾಗಿ ಸಂಸ್ಥಾಪಕ ಶ್ರೀ ಕೆ.ಎಂ.ಸಂದೇಶ್, ರಾಜ್ಯಾಧ್ಯಕ್ಷ ಶ್ರೀ ಮೇಲೂರು ಶ್ರೀನಿವಾಸ್, ರಾಜ್ಯ ಉಪಾಧ್ಯಕ್ಷ ಮುದುವಾಡಿ ಶ್ರೀ ರಘುನಾಥ್, ರಾಜ್ಯ ಕಾರ್ಯದರ್ಶಿ ಬಂಗಾರಪೇಟೆ ಶ್ರೀ ಮಂಜುನಾಥ್, ರಾಜ್ಯ ಖಜಾಂಚಿ ಶ್ರೀ ಹರಟಿ ಸಂಪತ್ ಜಿಲ್ಲಾಧ್ಯಕ್ಷ ಶ್ರೀ ವಿಭೂತಿಪುರ ಕಾಶಿನಾಥ್, ಶ್ರೀ ಮೇಲೂರು ಮಹೇಶ್, ಯುವ ನಾಯಕ ಸಂಪತ್ ಹಾಗೂ ಹಲವರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ನಮ್ಮ ಸಂಘಟನೆ ಇಂದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆ, ನಗರ, ಪಟ್ಟಣ, ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲೂ ದಲಿತ ಯುವಕರ ಕಟ್ಟಾಳುಗಳ ಪಡೆಯನ್ನು ಕಟ್ಟಲು ಹೆಜ್ಜೆ ಹಾಕಿದೆ, ಹಲವಾರು ಕಾರ್ಯಕರ್ತರನ್ನು ಅಂಬೇಡ್ಕರ್ ಸೇವಾ ಸಮಿತಿಯು ನಿಜ ಶಕ್ತಿಯೇ ಕಾರ್ಯಕರ್ತರು. ನಮ್ಮ ಸಂಘಟನೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು, ಉದ್ದಿಮೆದಾರರೂ, ರೈತರು, ವೃತ್ತಿಪರರೂ ತೊಡಗಿಕೊಂಡು ಈ ಸಂಘಟನೆಯ ಶಕ್ತಿಯನ್ನು ಹೆಚ್ಚು ಮಾಡಲು ಹೆಜ್ಜೆ ಹಾಕುತ್ತಿದೆ.
ನಮ್ಮ ಸಂಘಟನೆ ನಿರಂತರವಾಗಿ ದಲಿತರ ವಿವಿಧ ವಿಷಯಗಳಲ್ಲಿ ತನ್ನನ್ನ ತೊಡಗಿಸಿಕೊಂಡು ದಲಿತರ ಪರವಾದ ಹೋರಾಟಗಳನ್ನ ನಡೆಸಿಕೊಂಡು ಬರುತ್ತದೆ. ದಲಿತ ದೇಶವನ್ನು ಕಟ್ಟಲು ಕಟಿಬದ್ಧವಾಗಿರುವ ಅಂಬೇಡ್ಕರ್ ಸೇವಾ ಸಮಿತಿಯೂ ದಲಿತರೆಲ್ಲ ಕೈಜೋಡಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಂಘಟನೆ
ಅನುವಾದ
ಸಂಪಾದಿಸಿ- English: constitution, en:constitution
- ತೆಲುಗು:సంఘటనము(ಸಂಘಟನಮು)
ನಾಮಪದ
ಸಂಪಾದಿಸಿಸಂಘಟನೆ
ಅನುವಾದ
ಸಂಪಾದಿಸಿ- English: [[ ]], en: