Content deleted Content added
No edit summary
೨೮ ನೇ ಸಾಲು:
::::::: [[User:Teju2friends|ತೇಜಸ್]] ಅವರೇ, ೧) free ಗೆ ನೀವು ತೋರಿಸಿದ ಕೊಂಡಿಯಲ್ಲಿ ಕೊಟ್ಟಿದ್ದನ್ನು ಓದಿದ ಮೇಲಂತೂ "ತೆರೆದ" ಪದವೇ ಇಲ್ಲಿ ಹೆಚ್ಚು ಒಪ್ಪುತ್ತೆ ಅನ್ನಿಸಿತು. ಇಂಗ್ಲೀಶನಲ್ಲಿ free, freedom ಆಗಿ ಮಾರ್ಪಾಡಾಗುವುದು ಸರಳ ಆದರೆ ಅದನ್ನೇ ತೋರಿಸಲು "ಸ್ವತಂತ್ರ" ಅನ್ನುವ ನೇರ ಅನುವಾದ ಕನ್ನಡಕ್ಕೆ ಒಗ್ಗುವುದಿಲ್ಲ ಅಂತಾ ನನಗನಿಸುತ್ತದೆ ೨) "ಯಾದೃಚ್ಚಿಕ" ಪದದಲ್ಲಿರುವ ತೊಡಕುಗಳು "ನೆರಕೆ" ಎಂಬ ಪದದಲ್ಲಿ ಇಲ್ಲ ಆದ್ದರಿಂದ ಮಂದಿಗೆ ಅದರ ಬಗ್ಗೆ ತಿಳಿಸಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಈಗಾಗಲೇ ಬಳಕೆಯಲ್ಲಿರುವ ಪದಗಳ ಜೊತೆಗೆ ಸರಳವಾದ/ತುಸು ಹೊಸದೆನಿಸುವ ಕನ್ನಡದ ಪದಗಳನ್ನು ತೋರಿಸುವುದೂ "ಕನ್ನಡ ವಿಕ್ಷನರಿ"ಯ ಗುರಿಯಲ್ಲೊಂದಾಗಬೇಕು. (ಕನ್ನಡವು ನಿಂತ ನೀರಾಗಬಾರದು) ಆದ್ದರಿಂದ "ಶಬ್ದಕೋಶ"ಕ್ಕಿಂತ "ಪದನೆರಕೆ" ಪದಕ್ಕೆ ನನ್ನ ಒಲವು ೩) ಮಾದರಿ/ತೋರುಪುಟ (template) ಬಗ್ಗೆ ಮಾತಾನಾಡುತ್ತಿರುವಾಗ ನನ್ನ ಇನ್ನೊಂದು ಅನಿಸಿಕೆ ಎಂದರೆ ಇಲ್ಲಿ ಹಲವಾರು ಇಂಗ್ಲೀಶ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬರೆಯಲಾಗಿದೆ. ಎತ್ತುಗೆಗೆ : ಫೈಲ್ ಅಪಲೋಡ್, ಲಾಗ್-ಇನ್/ಔಟ್ ಇತ್ಯಾದಿ, ಇವುಗಳನ್ನು ಕನ್ನಡವಾಗಿಸಿದರೆ ಹಲವರಿಗೆ ಅವು ಏನಂತ ಬೇಗನೆ ತಿಳಿಯುತ್ತವೆ (ಕಡತ ಸೇರಿಸುವಿಕೆ, ಒಳಬರುವು/ಹೊರನಡೆ...). ನಿಮ್ಮ ಅನಿಸಿಕೆ ತಿಳಿಸಿ. - ಪ್ರಶಾಂತ ಸೊರಟೂರ
:::::::: ಪ್ರಶಾಂತ ಅವರೇ, <br/>೧. Free ಅನ್ನು "ಸ್ವತಂತ್ರ" ಎಂಬ ಅರ್ಥದಲ್ಲಿ ಬಳಸಲಾಗಿದೆ. ವಿಕ್ಷನರಿ '''Free Dictionary''' ಆಗಿದೆಯೇ ಹೊರತು '''Open Dictionary''' ಅಲ್ಲ. Open ಆಗಿದ್ದಲ್ಲಿ ''ತೆರೆದ'' ಅಥವ ''ಮುಕ್ತ'' ಹೊಂದಿಕೊಳ್ಳುತ್ತಿತ್ತು.<br/>೨. "ಯಾದೃಚ್ಚಿಕ" ಪದದಲ್ಲಿರುವ '''ಯಾವ''' ತೊಡಕುಗಳು "ನೆರಕೆ" ಪದದಲ್ಲಿಲ್ಲ ಎಂದು ದಯವಿಟ್ಟು ತಿಳಿಸಿ. ಜನರ ಬಳಕೆಯಲ್ಲಿರುವ ಮತ್ತು ಜನರಿಗೆ ಅರ್ಥವಗುವ ಪದನನ್ನು ಬಳಸಬೇಕೆನ್ನುವುದ್ದು ಉದ್ದೇಶ. ಹಾಗೆಯೇ, '''ಶಬ್ದಕೋಶ''' ಪದದಲ್ಲಿ ಯಾವ ತೊಡಕಿದೆಯೆಂದು ದಯವಿಟ್ಟು ತಿಳಿಸಿ.<br/>೩. ಇಂಗ್ಲಿಷ್ ನಲ್ಲಿರುವ ಇತರ ಪದಗಳುನ್ನು ಕನ್ನಡಕ್ಕೆ ತರಬೇಕೆನ್ನುವುದನ್ನು ನಾನೂ '''ಒಪ್ಪುತ್ತೇನೆ'''. <br/> -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೪:೫೪, ೫ ಮೇ ೨೦೧೨ (UTC)
::::::::: [[User:Teju2friends|ತೇಜಸ್]] ಅವರೇ, "ಮುಕ್ತ ಶಬ್ದಕೋಶ" ಅಂತಾ ಮುಖಪುಟದಲ್ಲಿ ಮಾರ್ಪಡಿಸಿದ್ದೀರಿ. "ಪದನೆರಕೆ" ನಿಮಗೆ ತುಂಬಾ ಹೊಸದು ಎನಿಸಿದರೆ ಅದು ಮಂದಿಗೆ ಗೊತ್ತಾಗುವವರೆಗೆ "ತೆರೆದ ಪದಕೋಶ" ಅಂತಾ ಬಳಸಬಹುದು. ಮೇಲೆ ಸಂದೀಪ ಅವರು ಬರೆದದಂತೆ ತೆರೆದ ಮತ್ತು ಮುಕ್ತ ಒಂದೇ ಹುರುಳು ಹೊಂದಿರುವಂತವು. "ತೆರೆದ" ಆಡುನುಡಿಯಲ್ಲಿ ಹೆಚ್ಚಾಗಿ ಕಾಣುವಂತದು - ಪ್ರಶಾಂತ ಸೊರಟೂರ
 
==Invite to WikiConference India 2011 ==