ಪುರುಷಸೂಕ್ತ

  1. ಪುರುಷಸೂಕ್ತ - ಋಗ್ವೇದದ ಹತ್ತನೆಯ ಮಂಡಲದ ತೊಂಬತ್ತನೆಯ ಸೂಕ್ತ. ಸೃಷ್ಟಿಕರ್ತೃವನ್ನು ಒಬ್ಬ ವಿರಾಜಪುರುಷನೆಂದು ಭಾವಿಸಿಕೊಂಡು ಆತನನ್ನೆ ಈ ಸೂತ್ರದ ದೇವತೆಯನ್ನಾಗಿ ಪರಿಗಣಿಸಲಾಗಿದೆ. ಈ ಸೂಕ್ತದಲ್ಲಿ ಹದಿನಾರು ಮಂತ್ರಗಳಿವೆ. ನಾರಾಯಣ ಇದರ ಋಷಿ, ಪುರುಷನೇ ದೇವತೆ. ಮೊದಲ ಹದಿನೈದು ಮಂತ್ರಗಳು ಅನುಷ್ಟುಪ್ ಛಂದಸ್ಸಿನಲ್ಲಿದ್ದು ಕಡೆಯದು ತ್ರಿಷ್ಟುಪ್ ಛಂದಸ್ಸಿನಲ್ಲಿದೆ. ಈ ಸೂಕ್ತದ ಧ್ಯಾನ-ಜಪಗಳಿಗೆ ಫಲಶ್ರುತಿಯನ್ನೂ ಹೇಳಲಾಗಿದೆ.
ಈ ಸೂಕ್ತ ಅಲ್ಪಸ್ವಲ್ಪ ವ್ಯತ್ಯಾಸಗಳೊಡನೆ ಕೃಷ್ಣಯಜುರ್ವೇದದ ತೈತ್ತಿರೀಯ ಅರಣ್ಯಕ, ಶುಕ್ಲ ಯಜುರ್ವೇದದ ವಾಜಸನೇಯ ಸಂಹಿತೆ. ಅಥರ್ವವೇದಗಳಲ್ಲೂ ಪಠಿತವಾಗಿದೆ. ಇದಲ್ಲದೆ ಇದರ ಕೆಲವು ಭಾಗಗಳ ವಿವರಣೆ ಶತಪಥಬ್ರಾಹ್ಮಣ, ತೃತ್ತಿರೀಯ ಬ್ರಾಹ್ಮಣ, ತೃತ್ತಿರೀಯ ಅರಣ್ಯಕ, ಬೃಹದಾರಣ್ಯಕೋಪನಿಷತ್ತು, ಶ್ವೇತಾತ್ವತರೋಪನಿಷತ್ತು ಮತ್ತು ಯಾಸ್ಕನ ನಿರುಕ್ತಗಳಲ್ಲೂ ಕಂಡುಬರುತ್ತದೆ.
ಇಲ್ಲಿಯ ಹದಿನಾರು ಮಂತ್ರಗಳು ಹೀಗಿವೆ;
1. ಆದಿಪುರುಷ ಸಾವಿರ (ಅಸಂಖ್ಯಾತ) ಶಿರಸ್ಸುಳ್ಳವ, ಸಾವಿರ ಚಕ್ಷುಸ್ಸುಳ್ಳವ, ಸಾವಿರ ಪದಗಳುಳ್ಳವ. ಆತ ಬ್ರಹ್ಮಾಂಡರೂಪ ವಿಶ್ವವನ್ನು ಎಲ್ಲ ಕಡೆಯಿಂದಲೂ ಸುತ್ತುವರಿದು ಅದಕ್ಕಿಂತಲೂ ಹತ್ತು ಅಂಗುಲದಷ್ಟು ಅತಿಕ್ರಮಿಸಿ ನಿಂತಿದ್ದಾನೆ.
  1. ಅಷ್ಟಮಹಾಮಂತ್ರ

ಅನುವಾದ

ಸಂಪಾದಿಸಿ
  • English: [[ ]], en: