ತಮ್ಮವರು>ತವರು. ‘ತಮ್ಮವರು ಇರುವ ಮನೆಯೇ ತವರುಮನೆ. ಹೀಗಾಗಿ ಗಂಡಿಗೂ ಹೆಣ್ಣಿಗೂ ಯಾರಿಗೂ ಅನ್ವಯವಾಗುತ್ತಿದ್ದ ಪದವಾಗಿತ್ತು ತವರು. ಅರ್ಥ ಸಂಕೋಚಗೊಂಡ ಪರಿಣಾಮವಾಗಿ ಇದು ಕೇವಲ ಹೆಣ್ಣಿನ ಪಾಲಿಗೆ ಮಾತ್ರ ಬಳಕೆಯಾಗುತ್ತಿದೆ. ಮದುವೆಯಾದ ಬಳಿಕ ತಾನು ಹುಟ್ಟಿದ ಮನೆ ಹೆಣ್ಣಿಗೆ ತವರು ಮನೆ ಆಗುತ್ತದೆ. [“ಒಂದು ಕಾಲದಲ್ಲಿ ಶಬ್ದಕ್ಕೆ ವಿಸ್ತಾರವಾದ ಅರ್ಥವಿದ್ದು, ಕ್ರಮೇಣ ಆ ಅರ್ಥವು ಸಂಕುಚಿತವಾದರೆ ಅದನ್ನು ಅರ್ಥಸಂಕೋಚ(Narrowing)ವೆಂದು ಕರೆಯುತ್ತಾರೆ”. ಉದಾ: ನೆಯ್, ಪೊಣ್, ಸೀರೆ, ಕುಪ್ಪಸ ಇತ್ಯಾದಿ] ‘ತವರು ಮನೆ’ಯೆಂಬ ನಾಮಪದ ತಾಯಿಯ ಮನೆ, ಹುಟ್ಟಿದ ಮನೆ, ಅವಳು ತವರುಮನೆಗೆ ಹೋಗಿದ್ದಾಳೆ ಇತ್ಯಾದಿ ಅರ್ಥಗಳನ್ನು ವ್ಯಕ್ತಪಡಿಸುತ್ತದೆ. ಇಂಗ್ಲಿಷಿನಲ್ಲಿ parent home ಎಂದಿದೆ.

ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ತವರು ಮನೆ

  1. ಕುಳಭವನ
  2. ತಾಯಿಯ ಮನೆ
  3. ಹುಟ್ಟಿದ ಮನೆ

ಅನುವಾದ ಸಂಪಾದಿಸಿ