ಚೌರಾಶೀತಿ ಸಂಪಾದಿಸಿ

  1. .ಎಂಭತ್ತ ನಾಲ್ಕು [೧]
  • ೮೪

ಪ್ರಯೋಗ ಸಂಪಾದಿಸಿ

ಈತನಾರೆ೦ದರಿವಿರೈ ನ
ಮ್ಮಾತನೀತನು ನಮ್ಮ ಕ೦ಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ |
ಈತ ಕಾಣಿರೆ ಹಿ೦ದೆ ಚೌರಾ
ಶೀತಿ ದುರ್ಗದಳೋಡಿ ಬದುಕಿದ
ನೀತ ಬಲುಗೈ ಬ೦ಟನೆ೦ದನು ಮಗಧಪತಿ ನಗುತ || ೭೭ ||(ಕುಮಾರವ್ಯಾಸ ಭಾರತ/೨.ಸಭಾಪರ್ವ::ಸಂಧಿ-೨)
  • ಪದವಿಭಾಗ-ಅರ್ಥ:ಈತನು+ ಆರೆ೦ದು(ಯಾರೆಂದು)+ ಅರಿವಿರೈ(ಗೊತ್ತಾಯಿತೆ?); ನಮ್ಮಾತನು (ನಮ್ಮ ಬಂಧು)+ ಈತನು ನಮ್ಮ (ಅಳಿಯ)ಕ೦ಸಂಗೆ+ ಈತನು+ ಅಳಿಯನು, ನಮಗೆ ಮೊಮ್ಮನು(ಮೊಮ್ಮಗನು), ಮಗನು ದೇವಕಿಗೆ, ಈತ ಕಾಣಿರೆ(ಕಂಡಿಲ್ಲವೆ? ಗೊತ್ತಿಲ್ಲವೆ?) ಹಿ೦ದೆ ಚೌರಾಶೀತಿ(ಎಂಭತ್ತ ನಾಲ್ಕು) ದುರ್ಗದಳು+ ಓಡಿ ಬದುಕಿದನು,+ ಈತ ಬಲುಗೈ ಬ೦ಟನು(ಮಹಾವೀರ)+ ಎ೦ದನು ಮಗಧಪತಿ ನಗುತ.
  • ಅರ್ಥ:ಮಗಧಪತಿ ಜರಾಸಂಧನು ತನ್ನ ಪರಿವಾರದವರಿಗೆ ಕೃಷ್ಣನನ್ನು ತೋರಿಸಿ ನಗುತ್ತಾ,'ಈತನು ಯಾರೆಂದು ಗೊತ್ತಾಯಿತೆ? ಇವನು ನಮ್ಮ ಬಂಧು; ಈತನು ನಮ್ಮ ಅಳಿಯನಾದ ಕ೦ಸನಿಗೆ ಈತನು ಸೋದರಅಳಿಯನು; ನಮಗೆ ಮೊಮ್ಮಗನು; ಇವನು ಕಂಸನ ತಂಗಿ ದೇವಕಿಗೆ ಮಗನು; ಈತನನ್ನು ಕಂಡಿಲ್ಲವೆ? ಹಿ೦ದೆ ನಾನು ಬೆನ್ನಟ್ಟಿದಾಗ ಎಂಭತ್ತ ನಾಲ್ಕು ದುರ್ಗಗಳಲ್ಲಿ ಓಡಿ ಅಡಗಿ ಬದುಕಿದನು. ಈತನು ಬಲುಗೈ ಬ೦ಟನು- ಮಹಾವೀರನು,' ಎ೦ದನು

ಉಲ್ಲೇಖ ಸಂಪಾದಿಸಿ

  1. ಸಿರಿಗನ್ನಡ ಅರ್ಥಕೋಶ