ಮೊಗೇರರು... ಉತ್ತರಕನ್ನಡ ಜಿಲ್ಲೆಯಲ್ಲಿರುವ ಈ ಸಮೂದಾಯ ಮೀನುಗಾರ ಸಮೂದಾಯ. ವೃತ್ತಿಯಲ್ಲಿ ಮೀನುಗಾರಿಕೆಯನ್ನು ಮಾಡಿಕೊಂಡು ಬರುತ್ತಿರುವ ಈ ಸಮೂದಾಯ ಪರಿಶಿಷ್ಟ ಜಾತಿಯಲ್ಲಿ ಗುರುತಿಸಿಕೊಂಡಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಈ ಸಮೂದಾಯದ ಭಾಂಧವರು, ನೆರೆಯ ಹೊನ್ನಾವರ, ಕುಮಟಾ, ಶಿರಸಿ, ಕಾರವಾರ, ಅಂಕೋಲ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಸಿದ್ದಾಪುರ ಮತ್ತು ಜೊಯಿಡಾ ತಾಲೂಕಿನಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಮೀನುಗಾರಿಕೆ ಮಾಡುವ ಇವರು, ಶೈಕ್ಷಣಿಕವಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೌಶಲ್ಯ ಆಧಾರಿತ ವೃತ್ತಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕವಾಗಿ ಹತ್ತು ಹಲವು ಕಟ್ಟಪಾಡುಗಳನ್ನು ಹೊಂದಿರುವ ಮೊಗೇರರು, ಶೌರ್ಯಕ್ಕೆ ಹೆಸರಾದವರು. ರಾಜಕೀಯವಾಗಿ ಗುರುತಿಸಿಕೊಳ್ಳಲು ಈ ಸಮೂದಾಯಕ್ಕೆ ಶಿಕ್ಷಣದ ಕೊರತೆ ಕಾರಣ. ಸಮುದ್ರವನ್ನೇ ನೆಚ್ಚಿಕೊಂಡಿರುವ ಈ ಸಮೂದಾಯ, ಮೀನುಗಾರಿಕೆಯನ್ನು ಪಾರಂಪಾರಿಕ ಶೈಲಿಯಲ್ಲಿ ಮಾಡಿಕೊಂಡು ಬಂದಿದೆ. ಬದಲಾದ ಮೀನುಗಾರಿಕೆಯ ಶೈಲಿಯನ್ನು ಅಳವಡಿಸಿಕೊಳ್ಳಲು ಆರಂಭಿಸಿದೆ. ತೀರಾ ಹಿಂದುಳಿದ ಈ ಸಮೂದಾಯಕ್ಕೆ ಪರಿಶಿಷ್ಟ ಜಾತಿಯ ಸೌಲಭ್ಯಗಳು ಮಾತ್ರ ಲಭಿಸುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು ನೆಚ್ಚಿಕೊಂಡೇ ಬದುಕುತ್ತಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳು ನಿಧಾನವಾಗಿ ಈ ಸಮೂದಾಯದಲ್ಲಿ ಕಂಡುಬರುತ್ತಿದೆ.

Return to "ಮೊಗೇರ" page.