ಎಳೆಯ ವಯಸ್ಸಿನ ಮಕ್ಕಳಿಗೆ ಬರುವ ಒಂದು ಬಗೆಯ ಸೆಡವು ರೋಗ
ಬಾಲಗ್ರಹವು ಮಗುವು ಹುಟ್ಟಿದ ದಿನದಿಂದ ಹನ್ನೆರಡನೇ ದಿನದ ವರೆಗೆ, ಪ್ರತಿ ದಿನ ಒಂದೊಂದರಂತೆ ಒಟ್ಟು ಹನ್ನೆರಡು ಬೇರೆ ಬೇರೆ ಇರುತ್ತದೆ. ಹಾಗೆಯೇ ಒಂದನೇ ತಿಂಗಳಿನಿಂದ ಹನ್ನೆರಡನೇ ತಿಂಗಳ ವರೆಗೆ ಪ್ರತಿ ತಿಂಗಳು ಬೇರೆ ಬೇರೆ, ಒಟ್ಟು ಹನ್ನೆರಡು . ಮತ್ತು ಒಂದನೇ ವರ್ಷದಿಂದ ಹನ್ನೆರಡನೇ ವರ್ಷದ ವರೆಗೆ ಬೇರೆ ಬೇರೆ ಒಟ್ಟು ಹನ್ನೆರಡು, ಹಾಗೂ ಇನ್ನೂ ಇತರೆ ಬಾಲಗ್ರಹಗಳು ಹನ್ನೆರಡು, ಎಂದೂ ಅಲ್ಲದೇ ಅತ್ಯಂತ ಕ್ರೂರಿಗಳಾದ ಪ್ರತ್ಯೇಕವಾದ ಆರು ಬಾಲಗ್ರಹಗಳೂ ಹೀಗೆ ಒಟ್ಟು ಐವತ್ನಾಲ್ಕು ಬಾಲಗ್ರಹಗಳು ಇರುತ್ತವೆ. ಎಂದು ಪ್ರಾಚೀನ ಸಂಸೃತ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಕ್ಕಳಿಗೆ ಬರುವ ಈ ಬಾಲಗ್ರಹ ಪೀಡೆಯು ಅವರ ಪಾಲಕರ ಅನಾಚಾರಗಳಿಂದ ಉಂಟಾಗುತ್ತದೆ. ಮತ್ತು ಆ ಶಿಶುವಿನ ಪೂರ್ವಜನ್ಮದ್ ಅ ಪಾಪ ಕರ್ಮಗಳಿಂದ ಈ ಜನ್ಮದಲ್ಲಿ ಸಂಭವಿಸುತ್ತದೆ. ವಿವಿಧ ಪಾತಕಗಳಿಗೆ ಅನುಗುಣವಾಗಿ ಅವು ತಮ್ಮ ತಮ್ಮ ಕಾಲಾವಧಿಯಲ್ಲಿ ನಾನಾ ವಿಧವಾದ ಪೀಡೆಯನ್ನು ಶಿಶುಗಳಿಗೆ ನೀಡುತ್ತವೆ ಎಂದು ಆ ಗ್ರಂಥಗಳಲ್ಲಿ ಹೇಳಲಾಗಿದೆ. ಅಲ್ಲದೇ ಈ ಎಲ್ಲ ಬಾಲಗ್ರಹಗಳಿಗೆ ಅಷ್ಟೇ ಸಂಖ್ಯೆಯಲ್ಲಿ ಅನ್ಯಾನ್ಯ ಮಂತ್ರ, ಚಿಕಿತ್ಸೆಗಳನ್ನು ವಿವರಿಸಲಾಗಿದೆ.